ತನ್ನ ಚಡ್ಡಿಯಲ್ಲಿ ಎಷ್ಟುದೊಡ್ಡ ತೂತಿದೆ ಅನ್ನುವ ಪರಿವೆ ಇಲ್ಲ ಬೇರೆಯವರ ಮನೆಯ ದೋಸೆಯಲ್ಲಿ ಎಷ್ಟು ದೊಡ್ಡ ತೂತಿದೆ ಅನ್ನೊದನ್ನ ನೋಡುವ ಕದನ ಕುತೂಹಲಿಗಳು. ನಮ್ಮ ಜನರಿಗಂತು ಈಚಿಚೆಗೆ ಸತ್ಯ ವಿಷಯಕ್ಕಿಂತ ಗಾಳಿ ಸುದ್ದಿಯ ಮೇಲೆನೆ ನಂಬಿಕೆ ಜಾಸ್ತಿ ಇಂತಹ ಜನರುಗಳೇ ಈ ವಿಘ್ನ ಸಂತೋಷಿಗಳ ಬಹುದೊಡ್ಡ Customer ಗಳು. ಇದರಿಂದ ಬೇರೆಯವರ ಮನಸಿನ ಮೇಲೆ ಯಾವ ಪರಿಣಾಮ ಬೀರ ಬಹುದು ಅನ್ನೊ ಯೋಚನೆಯೆ ಇವರಿಗೆ ಇರೋದಿಲ್ಲ ತಮ್ಮನ್ನ ತಾವು Breaking News ಕೊಡುವ ನಂ ೧ News Channel ಗಳು ಅಂತ ಅಂದುಕೊಂಡಿರ್ತಾರೆ.
ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನ ಜನರಿಗೆ ಇಂತಹ ಅನುಭವ ಆಗಿರುತ್ತೆ, ತಮ್ಮ ಪಾಡಿಗೆ ತಾವಿದ್ದರೂ ಕೂಡ ನೀವು ಎಲ್ಲೊ ಗೊತ್ತಿಲ್ಲದೇ ಮಾಡಿದ ಕೆಲಸವೋ ಅಥವ ನಿಮ್ಮ ಅರಿವಿಗೆ ಬಾರದ ಕೆಲವು ಘಟನೆಗಳು ಹತ್ತಾರು ಜನರ ಬಾಯಿಗೆ ಸಿಲುಕಿ ಕೊನೆಗೆ ಆ ವಿಷಯ ನಿಮ್ಮ ಕಿವಿಗೆ ಬಿದ್ದಾಗ ಅದು ಎಂದೂ ಕಂಡರಿಯದ ಘನ ಘೋರವಾದ ಸಂಗತಿ ಅನ್ನೊ ರೀತಿಯಲ್ಲಿ ಆ ಘಟನೆಯ Development, Screen play ಅಷ್ಟು ಅಚ್ಚು ಕಟ್ಟಾಗಿ ಇರುತ್ತವೆ. ಎಂತಹ ವಿಪರ್ಯಾಸ ಅಲ್ವ ಇದು….???
ಮೊನ್ನೆ ಮೊನ್ನೆ ನನ್ನ Face Book ಗೋಡೆಯ ಮೇಲೆ ಕಂಡ ಒಂದು ವಿಷಯ
ನೋಡಿ ಇದನ್ನ Follow ಮಾಡಿದ್ರೆ ನಿಮ್ಮ ಸುತ್ತ ಇರೋ ಕೆಲ ವಿಘ್ನ ಸಂತೋಷಿಗಳಿಂದ ಪಾರಾಗೋದಕ್ಕಾದ್ರು Try ಮಾಡಬಹುದು….

