Pages

Advertisement

Protected by Copyscape Duplicate Content Penalty Protection

ನಿಮಗೆ ನನ್ನ ಕೊನೆಯ ನಮನ


ಕರಗಿತು ಮಸಣದ ಮಣ್ಣಲ್ಲಿ
ಮೂರು ದಿನಗಳ ಈ ಜನುಮ
ದುಃಖದಲಿ ಸುಖದಲ್ಲಿ ಜೊತೆಯಿದ್ದ ನಮಗೆ
ಇಂದು ಬರಿಯ ಬೇಸರದ ಮೌನ

ಸವೆಸಿದರು ಚಪ್ಪಲಿಯ ಹಂಚಿದರು ಅಂಬಲಿಯ
ಪಟ್ಟ ಕಷ್ಟಗಳ ಲೆಕ್ಕ ಎಂತಿದ್ದರೇನು
ಪಾಪ ಪುಣ್ಯಗಳ ಲೆಕ್ಕ ಇಟ್ಟಿಹನು ಆ ಶಿವನು
ಮರಣದಲು ಸುಖವನ್ನೆ ನೀಡಿಹನು

ಮರಳಿ ಬಾರದ ಲೋಕಕ್ಕೆ ಹರಸುವೆನು ಸುಖ ಪಯಣ
ಎಂದಿಗೂ ಶಾಶ್ವತವಲ್ಲ ಈ ದುಃಖ ದುಮ್ಮಾನ
ನೆನಪಿನಲಿ ಬದುಕಿರಲು ನೀವು ನಮ್ಮ ಸನಿಹ

-ಮನೋರಂಜನ್

No comments:

Post a Comment