Photo Courtesy Google Image
ಯೋಚನೆ ಮಾಡೊವಾಗ ನಿಜವಾಗ್ಲೂ ಭಯ ಆಗುತ್ತೆ, ಇವತ್ತು ಬೆಳಗ್ಗೆ
ಊರಿಂದ ಬಂದು ಮಂಗಳೂರಲ್ಲಿ ಬಸ್ ಇಳಿಯೋವಾಗ, ಥೇಟ್ ಮಳೆಗಾಲದ ಹಾಗೆ, ಮೋಡ ಕವಿದು ಕತ್ಲೆ ಕತ್ಲೆ,
ಸಣ್ಣಕ್ಕೆ ಮಳೆ ಸುರಿತಾ ಇತ್ತು. ಆಫೀಸ್ ಹತ್ರ ಇಟ್ಟಿದ್ದ ಬೈಕ್ ತೆಗೊಂಡು ರೂಂ ಗೆ ಹೋಗೊವಾಗ
ಪುಲ್ಲ್ ಒದ್ದೆ ಆಗಿದ್ದೆ ಮತ್ತೆ ರೂಮ್ ಇಂದ ಆಫೀಸ್ ಬರೋ ಹೊತ್ತಿಗೆ ಮಳೆಗೆ ಅರ್ಧ ಒದ್ದೆ ಆಗಿದ್ದೆ……..
ಮಧ್ಯಾಹ್ನ ಊಟಕ್ಕೆ ಅಂತ ಹೊರಗಡೆ ಬಂದು
ನೋಡಿದ್ರೆ, ಟ್ರೈಲರ್ ನಲ್ಲಿ ತೋರ್ಸಿದ್ದೆ ಬೇರೆ ಸಿನಿಮಾದಲ್ಲಿ ಇರೋದೆ ಬೇರೆ ಅನ್ನೋಹಾಗೆ
ರಸ್ತೆಗಳನ್ನ ನೋಡಿದ್ರೆ ಬೆಳಗ್ಗೆ ಮಳೆ ಬಂದಿದೆ ಅನ್ನೋದಕ್ಕೆ ಯಾವ ಸುಳುಹು ಸಿಕ್ತಾ ಇರಲಿಲ್ಲ.
ಅದೆ ಮಂಗಳೂರಿನ ಬಿಸಿಲು, ಸೆಕೆ ಎಲ್ಲಾ ಮಾಮೂಲಿ. ಎಲ್ಲವೂ ಕನಸಿನಲ್ಲಿ ಬಂದು ಹೋದ ಹಾಗಿತ್ತು.
ನಾನು ಹೇಳೊದು ಮಾಮುಲಿ ಅಂತ ಅನ್ನಿಸ
ಬಹುದು. ಸ್ವಲ್ಪ ಯೋಚಿಸಿ, ಮಳೆಯ ನೀರು ಅರ್ಧ ದಿನಕ್ಕೆ ಭೂಮಿಯ ಶಾಖ ಬಿಸಿಲಿಗೆ ಇಂಗಿ ಹೋಯ್ತು.
ಅದೇ ಮಳೆಯೇ ಬರದೆ ನಾವು ಬರಿಯ ಬಿಸಿಲಿನಲ್ಲಿ ಓಡಾಡ್ತಾ ಇರ್ತಿದ್ರೆ ನಮ್ಮ ದೇಹದಲ್ಲಿರುವ ನೀರಿನ
ಅಂಶ ಯಾವ ವೇಗದಲ್ಲಿ ಇಂಗಿ ಮಾಯವಾಗಬಹುದು???? ಇದು ಪ್ರಕೃತಿಯ
ವೈಪರೀತ್ಯವೂ ಇರಬಹುದು. ಮುಂಬರುವ ದೋಡ್ಡ ಅಪಾಯದ ಮುನ್ಸೂಚನೆಯೂ ಇರಬಹುದು
ಅಲ್ವ???
